ಮ್ಯಾಲೆ ಕವ್ಕೊಂಡ

ಚಿನ್ನಾರಿ ಮುತ್ತಾ

ಮ್ಯಾಲೆ ಕವ್ಕೊಂಡ ಮುಂಗಾರು ಮೋಡ

ತೂರಿ ಬರ್ತಾನ ಚಂದ್ರಾಮ ನೋಡ || ಪ ||

ಒತ್ತರಿನಸಿ ಕತ್ತಲ ರಾಹು ಕೇತು

ಚಂದುಳ್ಳ ಚಿಗರಿ ಹೆಗಲೇರಿ ಕೂತು ||

ಬೆಂದಂತ ಬಾಳಿಗೆ ಬೆಳ್ದಿಂಗಳ್ ಸುರಿಸಿ

ಲೋಕವ ತುಂಬಿದ ವ್ಯಾಕುಲ ಹರಿಸಿ

ನೀಲಿಯ ನವಿಲ ಹಾರಿಸಿಕೊಂಡು

ಚುಕ್ಕಿಯ ಬಾವುಟ ಏರಿಸಿಕೊಂಡು ||

ಅಂಗಳಕೆ ಬರುತಾನೆ ಆವರಗೆ ತಾಳು

ಬಂದಾಗ ಮಾವಯ್ಯ ಬೇಕಾದ್ದು ಕೇಳು

ಮೋಡದ ನಾಡಿಗೆ ನಿನ್ನನ್ನು ಒಯ್ದು

ತೂಗಿ ತೊಟ್ಟಿಲನಿಂದು ರಂಬೆರಾಬೈದು ||

ಮುತ್ತನ ನಿದ್ದೆಗೆ ಕನಸಿಳಿಯೋ ಹೊತ್ತು

ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು

ಚಿನ್ನಾರಿ ಮುತ್ತಾ

ಚಿತ್ರ ನೋಡಿ